ಡ -
ಕನ್ನಡ ವರ್ಣಮಾಲೆಯಲ್ಲಿ ಟವರ್ಗದ ಮೂರನೆಯ ಅಲ್ಪಪ್ರಾಣಾಕ್ಷರ. ಅಶೋಕನ ಕಾಲದಲ್ಲಿ ಅಟ್ಟದ ಮೆಟ್ಟಲಿನಂತಿದ್ದ ಈ ಅಕ್ಷರಕ್ಕೆ ಬಾಗು ಬಂದದ್ದು ಶಾತವಾಹನರ ಕಾಲದಲ್ಲಿ. ಆ ಬಾಗಿಗೆ ಹೊಕ್ಕಳು ಕಾಣಿಸಿಕೊಂಡುದು ಬಾದಾಮಿಯ ಚಾಳುಕ್ಯರ ಕಾಲದಲ್ಲಿ. ಕದಂಬರ ಕಾಲಕ್ಕಾಗಲೆ ಮೂಡಿದ ತಲೆಕಟ್ಟು ಖಚಿತವಾಗುತ್ತ ಹೋಗಿ ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸ್ಪಷ್ಟವಾಯಿತು. ಅಕ್ಷರಕ್ಕೆ ಈಗಿನ ಸ್ವರೂಪ ಬರಹತ್ತಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ಸ್ವರೂಪವೇ ಈಗ ಮುಂದುವರಿಯುತ್ತಿದೆ. ಈ ಅಕ್ಷರ ಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ. 		(ಎ.ವಿ.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ